ಮಾನ್ಯ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಶಿಖಂಡಿಗೆ ಪ್ರಶಾಂತ್ ಭೂಶಣ್ ಹೋಲಿಸಿದ್ದು ಈಗ ರಾಷ್ಟ್ರಮಟ್ಟದಲ್ಲಿ ವಿಪರೀತ ಚರ್ಚೆಯಾಗುತ್ತಾ ಇದೆ. ಖಂಡಿತವಾಗಿಯೂ ಇದು ಚರ್ಚೆಯ ವಿಶಯವೇ. ಒಂದು ದೇಶದ ಅತ್ಯುನ್ನತ ಪದವಿಯನ್ನು ಹೊಂದಿದ ವ್ಯಕ್ತಿಯನ್ನು ಈ ರೀತಿ ಜರಿದಾಗ ಅದು ದೇಶಕ್ಕೇ ಅವಮಾನ. ಆದರೆ ಈ ಅವಮಾನ ದೇಶಕ್ಕೆ ಈಗ ಉಂಟಾಗಿದ್ದೇ..?? ಖಂಡಿತ ಅಲ್ಲ ೨೦೦೪ರ ಚುನಾವಣೆಯ ನಂತರ ಇದೇ ಮನಮೋಹನ ಸಿಂಗ್ ದೇಶವನ್ನಾಳಿದರು(?). ಈಗಲೂ ಅದೇ ಪದವಿಯಲ್ಲಿ ಇದ್ದಾರೆ. ದೇಶದ ಪ್ರಧಾನಿಯಾಗಿ ಅವರು ಗೌರವಕ್ಕೆ ಅರ್ಹರು. ಹೆಸರಾಂತ ಆರ್ಥಿಕ ತಜ್ನ,ಪ್ರಾಮಾಣಿಕ,ಸಾತ್ವಿಕ ಸಾದು ಸಜ್ಜನ ಎಂದೆಲ್ಲ ಅವರು ಹೆಸರುವಾಸಿ. ವೈಯಕ್ತಿಕವಾಗಿ ಅವರು ಹೌದು ಕೂಡ.
ಕಳೆದ ೮ ವರ್ಷದಲ್ಲಿ ಗಮನಾರ್ಹವಾದ ಯಾವ ಬದಲಾವಣೆ ದೇಶದಲ್ಲಿ ಆಗಿದೆ..?? ಬಡತನ,ಜನಸಂಖ್ಯೆ,ಬ್ರಷ್ಟಾಚಾರ ಇವು ದೇಶದ ಅತಿ ದೊಡ್ಡ ಸಮಸ್ಯೆಗಳು. ಇವುಗಳಲ್ಲಿ ಯಾವುದಾದರೊಂದನ್ನು ಮಾನ್ಯ ಮನಮೋಹನ್ ಸಿಂಗ್ ತಡೆಗಟ್ಟಿದ್ದಾರೆಯೇ..?? ಹೋಗಲಿ ಅದಕ್ಕಾಗಿ ಪ್ರಯತ್ನಿಸಿದ್ದಾರೆಯೆ..?? ಜನಲೋಕಪಾಲ್ ಬಿಲ್ ಜಾರಿಗೊಳಿಸುವ ವಿಶಯದಲ್ಲಿ ಅವರ ನಿಲುವನ್ನು ನಾವು ಕಂಡಿದ್ದೇವೆ. ಇದೆಲ್ಲ ಹೋಗಲಿ. ಕಳೆದ ಕೆಲವು ಸಮಯ ಹಿಂದೆ ಯುಪಿಎ ಅಧ್ಯಕ್ಷೆ ಎಂದು ಕರೆಸಿಕೊಳ್ಳುವ ವಿದೇಶಿ ನಾರಿ ಅನಾರೋಗ್ಯ ಬಿದ್ದಾಗ ನಮ್ಮ ದೇಶದಲ್ಲಿ ಚಿಕಿತ್ಸೆಗೆ ಆಸ್ಪತ್ರೆಯೇ ಇರಲಿಲ್ಲ..!! ಇನ್ನು ಈ ದೇಶದ ಬಡ ದೇಶವಾಸಿಗಳ ಗತಿ ಏನು..??
ಮಾಹಿತಿ ತಂತ್ರಜ್ನಾನದ ಈ ಯುಗದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ದೇಶಕ್ಕೆ ಕೊಟ್ಟಿರುವ ಅಭೂತಪೂರ್ವ ಉಡುಗೊರೆ ಏನು..?? ಒಂದಶ್ಟು ರಸ್ತೆ ದುರಸ್ತಿ, ಒಂದಶ್ಟು ಹೊಸ ಕಾನೂನುಗಳು, ಒಂದಶ್ಟು ವಿದೇಶ ಪ್ರವಾಸ, ಚಿತ್ರ-ವಿಚಿತ್ರ ಬಜೆಟ್ ಮಂಡನೆ ಮಾಡೊದೇ ಇವರ ಕೆಲಸವಾದರೆ ಅದಕ್ಕೆ ಈ ಪ್ರಾಮಾಣಿಕ,ಸಜ್ಜನನ ಅಗತ್ಯವಿತ್ತೇ..?? ಈ ವ್ಯಕ್ತಿ ದೇಶಕ್ಕಾಗಿ ಪ್ರಧಾನಿ ಪದವಿಯಲ್ಲಿ ಕುಳಿತು ಮಾಡಿದ ಮಹಾನ್ ಸಾಧನೆಯಾದರು ಏನು..??
ಪ್ರಧಾನಿಯಾಗಿ ಮನಮೋಹನ್ ಸಿಂಗ್ ವರ್ತನೆ ಒಂದು ಸಾಮಾನ್ಯ ಪ್ರಜೆಯಂತಾಗಿದೆ. ಒಬ್ಬ ಈ ದೇಶದ ಪ್ರಜೆ ಹೇಗೆ ತನ್ನ ನೈತಿಕತೆಯ ಕಣ್ಣನ್ನು ಮುಚ್ಚಿ ಜೀವನ ನಡೆಸುತ್ತಾನೋ ಹಾಗೆಯೇ ಸಿಂಗ್ ಕೂಡ ಜೀವಿಸುತ್ತಿದ್ದಾರೆ. ಆದರೆ ಇದಕ್ಕಾಗಿ ಅವರಿಗೆ ಪ್ರಧಾನಿ ಪದವಿಯ ಅಗತ್ಯವಿತ್ತೇ.??ಅಪರಾಧ ಮಾಡುವುದು ಕಾನೂನು ಬಾಹಿರ,ಹಾಗೆಯೆ ಅಪರಾಧ ನೋಡಿಕೊಂಡು ಸುಮ್ಮನೆ ಕುಳಿತಿರುವುದೂ ಕಾನೂನು ಬಾಹಿರ. ಈ ಸಂಧರ್ಭದಲ್ಲಿ ನಮ್ಮ ಪ್ರಧಾನಿ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರಲ್ಲವೆ? ನಾನು ತಪ್ಪು ಮಾಡಲಾರೆ, ಇನ್ನೊಬ್ಬರ ತಪ್ಪನ್ನು ನಿಲ್ಲಿಸಲಾರೆ ಎಂಬಂತೆ ಅವರ ವರ್ತನೆ ಇರುವುದು ನಿಜವಲ್ಲವೇ.? ತಪ್ಪು ಮಾಡಲಿಲ್ಲ ಎಂಬುದು ಪ್ರಶಂಸನಾರ್ಹವಾದರೆ,ತಪ್ಪುಗಳನ್ನು ಅಧಿಕಾರವಿದ್ದೂ ನಿಲ್ಲಿಸಲಿಲ್ಲ ಎಂಬುದು ಅಷ್ಟೇ ಖಂಡನೀಯ. ಹೀಗಿದ್ದೂ ಅವರನ್ನು ಪ್ರಾಮಾಣಿಕ ಎಂದು ಯಾವ ಅರ್ಥದಲ್ಲಿ ಕರೆಯಬಹುದು.?ಭ್ರಷ್ಟಾಚಾರ ಮಾಡಿಲ್ಲ ಎಂದು ಎದೆಯುಬ್ಬಿಸಿ ಸಿಂಗ್ ಹೇಳುತ್ತಾರೆ. ಅವರೊಬ್ಬ ಸಾಮಾನ್ಯ ರಾಜಕಾರಣಿಯಾಗಿದ್ದರೆ ಅವರನ್ನು ನಾವು ಪ್ರಶಂಸೆ ಮಾಡಬೇಕು ನಿಜ. ಒಬ್ಬ ಪ್ರಧಾನಿಯಾಗಿ ಅವರು ಯಾವ ನೈತಿಕತೆಯಲ್ಲಿ ಹೀಗೆ ಹೇಳಿದರೋ ತಿಳಿಯದು. ಭ್ರಷ್ಟಾಚಾರ ಮಾಡದೇ ಇರುವುದೇ ಒಂದು ಸಾಧನೆ ಎಂದು ತಿಳಿದಿದ್ದಾರೆ ಪಾಪ. ಪ್ರಧಾನಿಯಾಗಿ ಭ್ರಷ್ಟಾಚಾರ ಹತ್ತಿರವೂ ಸುಳಿಯಬಾರದು. ಇಂತಿರುವಾಗ ನಾನು ಮಾಡಿಲ್ಲ ಎಂದು ಹೇಳುವುದರಲ್ಲಿ ಏನು ಅರ್ಥ..?? ಸರಿ ಈ ದೇಶದಲ್ಲಿ ಅದ್ದೂ ಕೂಡ ಒಂದು ಸಾಧನೆ ಎಂದು ಪರಿಗಣಿಸೋಣ. ಒಬ್ಬ ಪ್ರಧಾನಿಯಾಗಿ ಭ್ರಷ್ಟಾಚಾರ ತಡೆಯಲು ಅವರು ಮಾಡಿದ ಕನಿಷ್ಟ ಪ್ರಯತ್ನವಾದರೂ ಏನು.? ಇಷ್ಟಿದ್ದೂ ಮಾನ್ಯ ಮನಮೋಹನ್ ಸಿಂಗ್ ಅವರೇ ನಿಮ್ಮನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ..?? ನೀವೊಬ್ಬ ಪ್ರಾಮಾಣಿಕ ಎಂದು ಹೇಗೆ ಕರೆಸಿಕೊಳ್ಳುತ್ತೀರಿ..?
ಇನ್ನು ಹೇಳಿ ಸಿಂಗ್ ಅವರೇ ನೀವು ಯಾವ "ಶಿಖಂಡಿ"ಗಿಂತ ಕಮ್ಮಿ..?

No comments:
Post a Comment