ದೇಶಕ್ಕೆ ಎನೂ ಮಾಡದೇ ಇರುವುದೂ ಒಂದು ರೀತಿಯ ದೇಶದ್ರೋಹವೇ. ಇಂಥ ಸಂಧರ್ಭದಲ್ಲಿ ನಮ್ಮಲ್ಲನೇಕರು ದೇಶದ್ರೋಹಿಗಳು ಎನ್ನುವ ಮಾತು ಸತ್ಯ.ಒಂದು ವೇಳೆ ಈಗ ಗಾಂಧೀಜಿ ಬದುಕಿದ್ದು ದೇಶಸೇವೆ ಮಾಡುತ್ತಿದ್ದರೆ ಇಂದಿನ ಬುದ್ಧಿಜೀವಿಗಳು ಅದರಿಂದ ಅವರಿಗಾಗುವ ಲಾಭವೇನು ಎಂದು ಲೆಕ್ಕ ಹಾಕಿ, ಪತ್ರಿಕೆಯೊಂದರಲ್ಲಿ ಪುಟಗಟ್ಟಲೆ ಲೇಖನ ಬರೆಯುತ್ತಿದ್ದರು. ಟಿವಿ ಮಾಧ್ಯಮಗಳಲ್ಲಿ ಒಂದುವರೆ ಗಂಟೆ(ಜಾಹೀರಾತು ಸಮೇತ) ಅವರ ದೇಶಪ್ರೇಮದ ಮಾಪನ ನಡೆಯುತ್ತಿತ್ತು. ಸಾಮಜಿಕ ತಾಣಗಳಾದ ಫೇಸ್ ಬುಕ್,ಟ್ವಿಟ್ಟರ್ ಗಳಲ್ಲಿ ಅದೆಷ್ಟೋ ಮಾತಿನ ಯುದ್ಧವೇ ನಡೆದು ಹೋಗುತ್ತಿತ್ತು. ಇಂಥ ದೇಶವಾಸಿಗಳನ್ನು ಬದಲಿಸಲು ಸಾಧ್ಯವೇ..???
ದೇಶವನ್ನು ಬದಲಿಸಲು ಹೊರಟವರಿಗೆ ಅರಿವಾಗಬೇಕಾದ ಸತ್ಯ ಎನೆಂದರೆ ಅವರು ಬದಲಿಸಬೇಕಾದ್ದು ದೇಶವನ್ನಲ್ಲ, ಬದಲಾಗಿ ಈ ದೇಶವಾಸಿಗಳನ್ನು. ದಾರಿಯಲ್ಲಿ ನೀವು ನಡೆದು ಹೋಗುವಾಗ ಕಂಡ ಕಸವನ್ನು ಎತ್ತಿ ಬುಟ್ಟಿಗೆ ನೀವು ಹಾಕಿದಿರಾದರೆ ಸುತ್ತಲಿನವರು ನಿಮ್ಮನ್ನು ಹುಚ್ಚ ಎಂದು ಛೇಡಿಸುತ್ತಾರೆ. ಅದು ವಾಸ್ತವ. ದೇಶವನ್ನು ಬದಲಿಸುತ್ತೇನೆ ಎಂದು ಹೊರಟವರ ಅತ್ಮಸ್ತೈರ್ಯವನ್ನೆ ಕುಗ್ಗಿಸುವ ಪ್ರಯತ್ನ ಇಂದಿನ ಬುದ್ಧಿಜೀವಿಗಳು ಬಹಳ ಘನಕಾರ್ಯದಂತೆ ಗೌರವಯುತವಾಗಿ ಮಾಡುತ್ತಾರೆ. ಇಂಥವರ ಜತೆ ವಾದ ಮಾಡುವುದು ಕೂಡ ಅಸಾಧ್ಯ. ಯಾಕೆಂದರೆ ಇವರುಗಳು ಮಾತಿನ ಮಲ್ಲರು. ತಾನೊಬ್ಬ ಅತಿಮಾನುಶ ಬುದ್ಧಿಜೀವಿ ಎಂದು ತೋರಿಸಿಕೊಳ್ಳುವ ತವಕ ಇವರಲ್ಲಿ ಇರುತ್ತದೆ.
ಈ ಮಾತುಗಳು ನಾನು ಯಾಕೆ ಹೇಳುತ್ತಿದ್ದೇನೆಂದರೆ "ಸತ್ಯಮೇವ ಜಯತೆ" ಎನ್ನುವ ಕಾರ್ಯಕ್ರಮವೊಂದನ್ನು ಚಿತ್ರರಂಗದ ನಟ ಆಮೀರ್ ಖಾನ್ ನಡೆಸಿಕೊಂಡು ಬರುತ್ತಿದ್ದಾರೆ. ದೇಶದ ಸಮಸ್ಯೆಗಳ ಮೇಲೊಂದು ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನವೊಂದನ್ನು ಆತ ಮಾದಿದ್ದಾನೆ. ನನಗಂತೂ ಆತನ ಪ್ರಯತ್ನದಲ್ಲಿ ಯಾವ ಹುಳುಕೂ ಕಾಣಿಸುತ್ತಿಲ್ಲ. ಹಣವೊಂದೇ ಅವನಿಗೆ ಮುಖ್ಯವಲ್ಲ ಎಂಬುದನ್ನು ಆತನನ್ನು ಸರಿಯಾಗಿ ಅವಲೋಕಿಸಿದರೆ ತಿಳಿದೀತು.ಇತ್ತೀಚೆಗೆ ಸಾಮಾಜಿಕ ಕಳಕಳಿಯುಳ್ಳ ಆತನ ಚಿತ್ರಗಳು ಅನೇಕವನ್ನು ನಾವು ನೋಡಿದ್ದೇವೆ. ಹಜಾರೆ ದಿನಗಟ್ಟಲೆ ಉಪವಾಸ ಕುಳಿತಾಗ ಯಾವೊಬ್ಬ ನಟನಾಗಲೀ, ಗಣ್ಯನಾಗಲೀ ಅತ್ತ ಸುಳಿಯಲಿಲ್ಲ. ಆಮೀರ್ ಖಾನ್ ಹಜಾರೆಯೊಂದಿಗೆ ಸಮಯ ಕಳೆದು ದೇಶಕ್ಕಾಗೆ ಕೈಜೋಡಿಸಿದ್ದು ಸುಳ್ಳಲ್ಲ.
ಏನೇ ಇರಲಿ,ಆತನೊಬ್ಬ ಭಾರತೀಯ, ದೇಶದ ಬಗ್ಗೆ ಮಾತನಾದುವ ಹಕ್ಕು ಅವನಿಗೆ ಇದೆ ಎಂಬುದು ನಾವು ಒಪ್ಪಲೇಬೇಕಾದ ಸತ್ಯ. ಆ ಹಕ್ಕನ್ನು ಅವನಿಂದ ಕಸಿಯಲು ನಾವ್ಯಾರು ನೀವ್ಯಾರು..??
ಕಳೆದ ಮೂರ್ನಾಲ್ಕು ಅಧ್ಯಾಯಗಳಲ್ಲಿ ಅನಾವಶ್ಯಕ ಮತ್ತು ನಿರುಪಯೋಗವಾದ್ದನ್ನು ಯಾವುದನ್ನೂ ಆತ ಹೇಳಿಲ್ಲ ಅಂದುಕೊಳ್ಳುತ್ತೇನೆ. ಹೀಗಿದ್ದಮೇಲೂ ಟೀಕೆಗಳು ನಿಂತಿಲ್ಲ. ಹಣಕ್ಕಾಗಿ ಆತ ಮಾದುತ್ತಿದ್ದಾನೆ ಎಂದು ಟೀಕಾಕಾರರು ಮಾಡುತ್ತಿರುವ ಆರೋಪ ನಿರಾಧಾರ. ನಿಜ ಜಾಹೀರಾತುದಾರರಿಂದ ಅವನಿಗೆ ಹಣ ಬರುತ್ತಿರಬಹುದು. ಆದರೆ ಈ ಕಾರ್ಯಕ್ರಮಕ್ಕಾಗಿ ಆತ ಮಾಡುತ್ತಿರುವ ಖರ್ಚಿನ ಬಗ್ಗೆ ಯಾರಿಗಾದರು ಗೊತ್ತೇ..?? ಕ್ಯಾಮೆರಾ ಹಿಡುಕೊಂಡು ದೇಶಸುತ್ತುವ ಆತನ ತಂಡ ಪಡುತ್ತಿರುವ ಕಷ್ಟ ಏನು ಅಂತ ಗೊತ್ತೇ..? ಇದಕ್ಕೆಲ್ಲಾ ತಗಲುವ ಖರ್ಚು ಎಲ್ಲಿಂದ ಬರಬೇಕು..?? ಜಾಹಿರಾತಿನಿಂದ ಬರುವ ಹಣ ಅದಕ್ಕಾಗಿ ಉಪಯೋಗಿಸುತ್ತಿರಬಹುದು ಆಮೀರ್. ಜಾಹೀರಾತು ಇಲ್ಲದೆ ಕಾರ್ಯಕ್ರಮ ನಡೆಸುವ ಅನಿವಾರ್ಯತೆ ಏನಿದೆ? ಅಥವಾ ಹಣ ಅವನ ಜೇಬಿನಿಂದ ಭರಿಸಲಿ ಎಂದು ಯಾವುದಾದರು ಬುದ್ಧಿಜೀವಿ ವಾದಿಸಿದರೆ ಆ ಜೀವಿ ದೇಶಕ್ಕಾಗಿ ವಿನಿಯೋಗಿಸಿದ ಹಣವೆಷ್ಟು ಎಂಬುದನ್ನು ಪರಾಮರ್ಶಿಸಲಿ.
ಆಮೀರ್ ಖಾನ್ ವ್ಯವಸ್ತೆಯನ್ನು ಬದಲಿಸಬೇಕೆಂದು ಹೊರಟಿದ್ದಾನೆ.ನಿಜ ಅಲ್ಲಿ ಹುಳುಕಿದೆ. ಆದ್ರೆ ಆತ ನಿಜವಾಗಿಯೂ ಬದಲಿಸಬೇಕಾದು ಈ ದೇಶದ ಜನರನ್ನು,ಅವರ ಮನಸ್ಸನ್ನು. ಪ್ರತಿಯೊಂದನ್ನು ಲಾಭನಷ್ಟದ ದೃಷ್ಟಿಕೋನದಿಂದಲೇ ಅಳೆಯುವ ಈ ದೇಶವಾಸಿ ಅನಾಗರೀಕ ಬುದ್ಧಿಜೀವಿಗಳನ್ನು ಬದಲಿಸಬೇಕಾದ ಅನಿವಾರ್ಯತೆ ಇದೆ.ಇಲ್ಲದೇ ಹೋದರೆ ಈ ದೇಶ ಹೀಗೇ ಉಳಿಯಲಿದೆ. ಮಗು ಹುಟ್ಟುವಾಗೆಲೇ ಅದರ ಮುಂದೆ ಈ ವ್ಯವಸ್ಥೆ ವಾತಾವರಣ ಇರುತ್ತದೆ. ಉತ್ತಮ ಸಮಾಜ,ದೇಶ ಹೇಗಿರುತ್ತದೆ ಎಂಬ ಅರಿವು ಆ ಮಗೂಗೆ ಇರಲ್ಲ. ಹಾಗಿರುವಾಗ ಆ ಮುಗು ಅನಾಗರಿಕ ಸಮಾಜದ ಅಂಗವಾಗುತ್ತದೆಯೇ ಹೊರತು, ಸಮಾಜದಲ್ಲಿ ನಾಗರೀಕತೆಯ ಬೀಜ ಬಿತ್ತನೆ ಅದರಿಂದ ಅಸಾಧ್ಯ. ದೇಶವಾಸಿಗಳೇ ದಯವಿಟ್ಟು ಎಲ್ಲವನ್ನೂ ಲಾಭನಷ್ಟದ ದೃಷ್ಟಿಕೋನದಿಂದ ಅಳೆಯುವುದನ್ನು ಬಿಟ್ಟುಬಿಡಿ. ಪ್ರತಿಯೊಬ್ಬರೂ ಬುದ್ಧಿಜೀವಿಗಳೇ ಆದರೆ ನಿಮ್ಮ ಬುದ್ಧಿಯ ಅತಿಪ್ರದರ್ಶನದ ಅಗತ್ಯ ದೇಶಕ್ಕೆ ಇಲ್ಲ. ಸಾಧ್ಯವಾದರೆ ಆಮೀರ್ ನಂತೆ ದೇಶಕ್ಕೆ ನಿಮ್ಮಿಂದಾಗುವ ಸೇವೆ ಸಲ್ಲಿಸಿ.ನಿಮ್ಮನ್ನು ನೀವು ಬದಲಿಸಿಕೊಳ್ಳಿ. ಇಲ್ಲಾಂದ್ರೆ ಚಾನೆಲ್ ಚೇಂಜ್ ಮಾಡಿ......

No comments:
Post a Comment