ಯುವಜನಾಂಗದಲ್ಲಿನ ದೇಶಪ್ರೇಮ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆಯೇ.?? ಹೌದು ಎಂಬ ಸಂದೇಹ ಕಾಡುತ್ತಿದೆ. ಇದಕ್ಕೆ ಕಾರಣ ಅನೇಕ ಇರಬಹುದು.ಆದರೆ ಇದು ದೇಶಕ್ಕೆ ಒಳಿತಲ್ಲ ಎಂಬುದಶ್ಟೆ ಸತ್ಯ.
ಕಳೆದ 1-2 ದಶಕದಲ್ಲಿ ನಾವು ಕೇವಲ ಬೆರಳೆಣಿಕೆಯಶ್ಟು ಯುವಕರನ್ನು ಸಮಾಜಮುಖಿಯನ್ನಾಗಿ ಕಂಡಿದ್ದೇವೆ.
ಹಾಗಾದರೆ ಯುವಜನಾಂಗ ಹಳಿ ತಪ್ಪುತ್ತಿರುವುದೆಲ್ಲಿ...???
ಜಾಗತೀಕರಣ ಎಂಬ ಕಲ್ಪನೆ ಭಾರತ ಪ್ರವೇಶಿಸಿದಾಗ ಇಲ್ಲಿ ಅನೇಕ ಬದಲಾವಣೆಗಳು ಉಂಟಾದವು. ಅದರಲ್ಲೂ ಜನಸಂಖ್ಯೆಯಲ್ಲಿ ಉನ್ನತ ಸ್ಥಾನ ಹೊಂದಿರುವ ಭಾರತಕ್ಕೆ ಅದು ವರವಾಗಿ ಪರಿಣಮಿಸಿತು. ನಿರುದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಅದು ಪರಿಹಾರ ಕೊಟ್ಟಿತು. ಅದರಲ್ಲೊ ನಮ್ಮ ಯುವಜನಾಂಗ ಜಾಗತೀಕರಣವನ್ನು ಬಹಳವಾಗಿ ಒಪ್ಪಿಕೊಂಡಿತು. ಯಾಕೆಂದರೆ ಯುವಪೀಳಿಗೆಗೆ ಅದು ಹೊಸ ಆಯಾಮಗಳನ್ನು ನೀಡುವುದರಲ್ಲಿ ಯಶಸ್ಸು ಕಂಡಿತು. ಜಾಗತೀಕರಣದೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಪರಿಚಯವಾಗುತ್ತಿದಂತೆ ಯುವ ಪೀಳಿಗೆ ಅದರತ್ತ ಆಕರ್ಶಣೆಗೊಂದಿದ್ದು ಸುಳ್ಳಲ್ಲ. ಯಾಕೆಂದರೆ ಆ ಜಗತ್ತು ಒಬ್ಬ ಯುವಕ/ತಿ ಬಯಸುವ ಎಲ್ಲ ಸುಖ ಸೌಭಾಗ್ಯಗಳನ್ನು ಅವರಿಗೆ ನೀಡಿತ್ತು. ಇಲ್ಲಿಂದಲೇ ಪೀಳಿಗೆ ದೇಶದತ್ತ ಗಮನ ಹರಿಸುವುದನ್ನು ಮರೆತು ಬಿಟ್ಟಿತ್ತು.
ವೃತ್ತಿಪರತೆ ಮತ್ತು ದೇಶಪ್ರೇಮವನ್ನು ತೂಗಿದಾಗ ಯುವಜನಾಂಗಕ್ಕೆ ವೃತ್ತಿಯೇ ಮೇಲೆನಿಸಿದ್ದು ದುರದೃಶ್ಟ್ಕರ. ಇದೇ ವೃತ್ತಿಪರತೆ ಅವರ ದೇಶಪ್ರೇಮವನ್ನು ನುಂಗಿ ಹಾಕಿ ಸಮಾಜದಿಂದ ದೂರ ಕೊಂಡೊಯ್ದುಬಿಟ್ಟಿದೆ. ಒಬ್ಬ ವೃತ್ತ್ತಿಪರ ಯುವಕನನ್ನು ನಾವು ನೋಡಿದಾಗ ನಮಗೆ ಅವನ ಜೀವಶೈಲಿಯ ಪರಿಚಯ ಅಗುತ್ತದೆ. ಆತ ಬೆಳಗಾಗೆದ್ದು ಆಫೀಸ್ ಗೆಂದು ಹೊರಟರೆ ಮನೆ ತಲುಪುವುದು ರಾತ್ರಿಯಾದ ಮೇಲೆಯೇ. ಸಮಾಜದತ್ತ ಅವನ ದೃಶ್ಟಿ ಯಾವ ಕಾರಣಕ್ಕು ಬೀಳುವುದಿಲ್ಲ. ಸಮಾಜದ ಯಾವೊಂದು ವ್ಯಕ್ತಿಯೊಂದಿಗೆ ಸಂಪರ್ಕ ಕೂಡಾ ಅವನಿಗೆ ಹೆಚ್ಚು ಕಡಿಮೆ ಇರುವುದಿಲ್ಲ ಎಂದೇ ಹೇಳಬಹುದು. ಇಂತಿರುವ ಒಬ್ಬ ವ್ಯಕ್ತಿ ದೇಶಪ್ರೇಮನ್ನು ಹೇಗಾದರೂ ಮೈಗೂಡಿಸಿಯಾನು...??
ನಮ್ಮಲ್ಲಿರುವ ಅಸಹ್ಯ ರಾಜಕಾರಣಗಳು ಕೂಡ ಒಂದು ಕಾರಣವಾಗಬಲ್ಲುದು. ಆದರೆ ಅದು ಸಕಾರಣವಲ್ಲ. ಒಬ್ಬ ಅಣ್ಣಾ ಹಜಾರೆ ಬಂದಾಗ ಅವರ ಹಿಂದೆ ಒಂದಶ್ಟು ಯುವಕರು ಬಂದು ಬೊಬ್ಬಿರಿದರು. ಹಜಾರೆ ಹೊಗುವ ಮೊದಲೇ ಇವರು ಮಾಯ. ಯಾಕೆಂದರೆ ಇವರು ಅಫೀಸ್ ಗೆ ರಜ ಹಾಕುವಂತಿಲ್ಲ. ಮಾತನಾಡಿಸಲು ಹೊರಟರೆ ಇವರು ರಾಜಕಾರಣಿಗಳನ್ನು ದೂರುತ್ತಾರೆ. ದೇಶ ಅವರಿಂದಲೇ ಹಾಳಾಗಿದೆ, ವಿದೇಶದಲ್ಲಿ ಹಾಗಿದೆ ಹೀಗಿದೆ ಎಂದೆಲ್ಲ ಹೇಳುವ ಇವರು ಒಂದು ಕ್ಶಣವೂ ದೇಶದ ಬಗ್ಗೆ ಯೋಚಿಸಿದವರಲ್ಲ. ಯೋಚಿಸಲು ಇವರ ಬಳಿ ಸಮಯ ಇಲ್ಲ.
ದೇಶದ ಸಮಸ್ಯೆಗಳು ಇವರಿಗೆ ಯಾವತ್ತೂ ಒಂದು ಸಮಸ್ಯೆಗಳಾಗಿ ಕಂಡಿಲ್ಲ. ಸ್ಪರ್ಧಾತ್ಮಕ ಜಗತ್ತಿನ ವೃತ್ತಿಪರತೆ ದೇಶದ ಪ್ರಗತಿಗೆ ಮುಳುವಾಗಿದೆ ಎಂದರೂ ತಪ್ಪಾಗಲಾರದು. ಸೇವೆಗಿಂತ ಸಾಧನೆಯೇ ಮುಖ್ಯವಾದಾಗ ಸಮಾಜದ ಉನ್ನತಿ ಎಲ್ಲಿಂದ ಸಾಧ್ಯ..?? ಒಂದು ಕ್ಶಣ ಯೊಚಿಸಿ. ಭಗತ್ ಸಿಂಗ್,ಬೋಸ್,ಗಾಂಧಿ ಸಾಧನೆಯೇ ಜೀವನದ ಪರಮೋಚ್ಚ ಗುರಿ ಎಂದು ಭಾವಿಸಿದ್ದರೆ ನಾವು ಇಂದು ಹೀಗಿರಲು ಸಾಧ್ಯವಾಗುತ್ತಿತ್ತೇ..? ಹಣ ಮತ್ತು ಮೋಹಗಳು ಅವರನ್ನು ಬಂದಿಸಿದ್ದರೆ ನಮ್ಮ ಸ್ಥಿತಿ ಎನಾಗುತ್ತಿತ್ತು..??
ವೃತ್ತಿಪರತೆ ಪ್ರತಿಯೊಬ್ಬ ಮನುಶ್ಯನಿಗೂ ಬೇಕು ಏಕೆಂದರೆ ಅದು ಹೊಟ್ಟೆಪಾಡು. ಆದರೆ ಅದು ಅತಿರೇಕವಾದಾಗ ಸಮಾಜದ ಅವನತಿ ಅಲ್ಲಿಂದ ಶುರುವಾಗುತ್ತದೆ. ಹಣದ ವ್ಯಾಮೋಹಕ್ಕಿಂತಲೂ ಇಂದಿನ ಯುವಜನಾಂಗ ಸಾಧನೆಯ ವ್ಯಾಮೋಹಕ್ಕೆ ಬಿದ್ದಿರುವುದು ಇತ್ತೀಚಿನ ದಿನಗಳಲ್ಲಿ ಸ್ಪಶ್ಟ. ಎಲ್ಲರಿಗೂ ನಾರಾಯಣಮೂರ್ತಿ,ಅಜೀಂ ಪ್ರೇಮ್ ಜಿ ಆಗುವ ತವಕ.
ಮಾಹಿತಿ ತಂತ್ರಜ್ನಾನದ ಈ ಯುಗದಲ್ಲಿ ಎಲ್ಲವು ಸುಲಭಸಾದ್ಯ. ಆದರೂ ಇಂದಿನ ಯುವ ಪೀಳಿಗೆಗೆ ದೇಶದ ಬಗ್ಗೆ ಯೋಚಿಸಲೂ ಸಮಯವಿಲ್ಲದ್ದು ಅತಿ ಬೇಸರದ ಸಂಗತಿ. ಯುವಕರೇ ದೇಶದ ಆಸ್ತಿ ಎಂದು ತಿಳಿದೂ ನಿರ್ಲಕ್ಶ್ಯ ವಹಿಸುತ್ತಿರುವುದು ದುರಾದೃಶ್ಟ. ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಅರಿತರೆ ದೇಶದ ಪ್ರಗತಿ ನಿಶ್ಚಿತ. ಆದರೆ ಆ ಕರ್ತವ್ಯಗಳನ್ನು ಬೇರೆಯವರು ಮಾಡಲು ಕಾದರೆ ಮಾಡುವವರು ಮುಂದೆ ಬರುವುದೇ ಇಲ್ಲ. ಇನ್ನಶ್ಟು ಕಾಲ ದೇಶಕ್ಕೆ ಇದೇ ದುಸ್ಥಿತಿ.
ಸಾಧನೆಗಿಂತ ಸೇವೆ ಮಾಡಿದಾಗಲೆ ಜೀವನ ಅರ್ಥಪೂರ್ಣ. ಯುವಜನಾಂಗ ಇದನ್ನು ಅರಿತು ದೇಶಪ್ರೇಮವನ್ನು ಮೈಗೂಡಿಸಿ ದೇಶಸೇವೆ ಮಾಡಲಿ ಎಂಬುದು ನಮ್ಮ ಆಶಯ. ಭಾರತ ಮಾತೆ ನಮಗೆಲ್ಲ ಆ ಶಕ್ತಿ ನೀಡಲಿ .
No comments:
Post a Comment